ಬೇಕಾಗುವ ಸಾಮಗ್ರಿ
3 ಮಾವಿನಹಣ್ಣು
1 ಕಪ್ ತೆಂಗಿನಹಾಲು
1/2 ಕಪ್ ಬೆಲ್ಲದ ಪುಡಿ
1/4 ಚಮಚ ಏಲಕ್ಕಿ
ಮಾಡುವ ವಿಧಾನ:
ಮಾವಿನಹಣ್ಣಿನ ಸಿಪ್ಪೆ ಸುಲಿಯಿರಿ, ನಂತರ ತಿರುಳು ಕತ್ತರಿಸಿ ಮಿಕ್ಸಿಯಲ್ಲಿ ರುಬ್ಬಿ, ಕೆಲವರು ಕೈಯಲ್ಲಿ ಹಿಸುಕುತ್ತಾರೆ ಅದಕ್ಕಿಂತ ಮಿಕ್ಸಿಯಲ್ಲಿ ರುಬ್ಬಿದರೆ ಒಳ್ಳೆಯದು, ಮೃದುವಾಗಿ ಬರುವುದು.
ಈಗ ತೆಂಗಿನಕಾಯಿ ಹಾಲು, ಏಲಕ್ಕಿ ಪುಡಿಸೇರಿಸಿ, ಬೆಲ್ಲದ ಪುಡಿಗೆ ಸ್ವಲ್ಪ ನೀರು ಹಾಕಿ ಬೆಲ್ಲದ ಪಾಕ ಮಾಡಿ, ತಣ್ಣಗಾದ ಮೇಲೆ ಮಾವಿನಹಣ್ಣಿನ ಪೇಸ್ಟ್ಹಾಕಿ ಮಿಕ್ಸ್ ಮಾಡಿ.
ನಂತರ ಒಂದು 4-5 ಗಂಟೆ ಫ್ರಿಡ್ಜ್ನಲ್ಲಿಟ್ಟು ಸರ್ವ್ ಮಾಡಿ. ಇದು ದೋಸೆ, ಚಪಾತಿ ಜೊತೆ ತಿನ್ನಲು ಸೂಪರ್ ಆಗಿರುತ್ತದೆ.
ಇತರ ಟಿಪ್ಸ್:
ನೀವು ಈ ರಸಾಯನ ಮಾಡಲು ಯಾವುದೇ ಬಗೆಯ ಮಾವಿನಹಣ್ಣುಗಳನ್ನು ಬಳಸಬಹುದು. ಬೆಲ್ಲದ ಬದಲಿಗೆ ಸಕ್ಕರೆ ಕೂಡ ಬಳಸಬಹುದು, ಆದರೆ ಬೆಲ್ಲ ಹೆಚ್ಚು ಆರೋಗ್ಯಕರ ನೀವು ತೆಂಗಿನಕಾಯಿ ತುರಿದು ಅದನ್ನು ಹಿಂಡಿ ತೆಂಗಿನಕಾಯಿ ಹಾಲು ತೆಗೆದು ಬಳಸಬಹುದು ಅಥವಾ ಡಬ್ಬಗಳಲ್ಲಿ ಸಿಗುವ ತೆಂಗಿನಕಾಯಿ ಹಾಲು ಸೇರಿಸಬಹುದು. ಇನ್ನು ತೆಂಗಿನಕಾಯಿ ಹಾಲು ಬದಲಿಗೆ ಹಾಲು ಅಥವಾ ಬಾದಾಮಿ ಹಾಲು ಬಳಸಬಹುದು ನೀವು ಇದಕ್ಕೆ ಬಾಳೆಹಣ್ಣು, ಹಲಸಿನಹಣ್ಣು, ಕರ್ಬೂಜ ಹಣ್ಣು ಮಿಕ್ಸ್ ಮಾಡಿ ಹಾಕಬಹುದು.
ತೆಂಗಿನ ಕಾಯಿ ಹಾಲು ತೆಗೆಯುವುದು ಹೇಗೆ?
ತೆಂಗಿನಕಾಯಿ ತುರಿದು ಅದನ್ನು ಸ್ವಲ್ಪ ನೀರು ಹಾಕಿ, ಮಿಕ್ಸಿಯಲ್ಲಿ ರುಬ್ಬಿ ನಂತರ ಶುದ್ಧ ಬಟ್ಟೆಯಲ್ಲಿ ಹಾಕಿ ಹಿಂಡಿ, ಹೀಗೆ ಮಾಡಿದರೆ ಕಾಯಿಹಾಲು ತೆಗೆಯುವುದು ಸುಲಭವಾಗುವುದು
ಮಾವಿನ ಹಣ್ಣು ತಿನ್ನುವುದರಿಂದ ದೊರೆಯುವ ಪ್ರಯೋಜನಗಳು
ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮಾವಿನಹಣ್ಣು ಬೇಸಿಗೆಯಲ್ಲಿ ಆರೋಗ್ಯಕ್ಕೆ ಒಳ್ಳೆಯದು, ಇದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಮಾವಿನಹಣ್ಣು ಸೀಸನಲ್ ಹಣ್ಣು, ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.